ಎರ್ಲಡ್ಡು (ಗ್ರೇಟ್ ಇಂಡಿಯನ್ ಬಸ್ಟರ್ಡ್)

ಗ್ರುಯಿಫಾರ್ಮಿಸ್ ಗಣದ, ಒಟಿಡೇ ಕುಟಂಬದ ಹಕ್ಕಿ. ವೈಜ್ಞಾನಿಕ ಹೆಸರು ಆರ್ಡಿಯೋಟಿಸ್ ನೈಗ್ರಿಸೆಪ್ಸ್. ಕನ್ನಡದ ಹೆಸರು ಎರ್ಲಡ್ಡು. ಇದನ್ನು ಕರ್ಲೆ ಹದ್ದು, ದೊರವಯ್ಯನ ಹಕ್ಕಿ ಎಂದು ಕರೆಯುತ್ತಾರೆ.  ಬಿಳಿಕತ್ತಿನ ಕಂದು ಮೈ ಬಣ್ಣದ ಹಕ್ಕಿ. ಹದ್ದಿಗಿಂತಲೂ ಗಾತ್ರದಲ್ಲಿ ದೊಡ್ಡದು. ಕಾಲು ಮತ್ತು ಕತ್ತು ನೀಳವಾಗಿರುತ್ತದೆ. ಪೂರ್ವಘಟ್ಟಗಳವರೆಗೆ ಕಾಣಿಸುತ್ತಿದ್ದ ಈ ಹಕ್ಕಿ ಇಂದು ಬೇಟೆ ಹಾಗೂ ಆವಾಸ ನಾಶದಿಂದ ಧಾರವಾಡ, ಬಳ್ಳಾರಿಗೆ ಸೀಮಿತವಾಗಿದ್ದು, ಅಪಾಯದ ಅಂಚಿನಲ್ಲಿದೆ ಎಂದು ಘೋಷಿಸಲಾಗಿದೆ. (ಅನುಸೂಚಿ - 1, ಭಾಗ - 3)
ಮಾರ್ಚ್‍ನಿಂದ ಸೆಪ್ಟೆಂಬರ್ ಸಂತಾನೋತ್ಪತ್ತಿ ಕಾಲ.   ಪೊದೆಗಳ ನಡುವೆ ಗೂಡುಕಟ್ಟಿ ಮೊಟ್ಟೆ ಇಡುತ್ತವೆ. ರಾಜಾಸ್ಥಾನದ ರಾಜ್ಯ ಪಕ್ಷಿ.

ಹೌಬರ ಬಸ್ಟರ್ಡ್ (ಚ್ಲೈಮೈಡೋಟಿಸ್ ಅನ್ಡ್ಯಲೇಟ) ಎಂಬ ಇನ್ನೊಂದು ಬಗೆಯ ಎರ್ಲಡ್ಡು ಕೆರಳದಲ್ಲಿ ಒಮ್ಮೆ ಕಂಡು ಬಂದಿತ್ತು. ಅಪಾಯದಂಚಿನಲ್ಲಿರುವ ಪಕ್ಷಿ.

(ಕೆ.ಎಸ್.ಎನ್.)
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ